Home
ದಿನಾಂಕ 01-03-2012 ರಿಂದ ಅಳ್ನಾವರ ಪಟ್ಟಣ ಪಂಚಾಯತಿಯಲ್ಲಿ ನಾಗರೀಕ ಸೇವೆಗಳ ಖಾತರಿ ಅಧಿನಿಯಮ 2011ನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಸದರ ಯೋಜನೆಯ ಉಪಯೋಗ ಪಡೆದುಕೊಳ್ಳಲು ಕೋರಿದೆ.
______________________________________________________________________________________________________________________________
ಅಳ್ನಾವರ ಪಟ್ಟಣ ಪಂಚಾಯತಿ: ಅಳ್ನಾವರ ಪಟ್ಟಣ ಪಂಚಾಯತಿಯಿ ಸನ್ 1973 ರಲ್ಲಿ ಸ್ಥಾಪನೆಯಾಯಿತು.ಅಳ್ನಾವರ ಪಟ್ಟಣದಲ್ಲಿ ಒಟ್ಟು 15 ವಾರ್ಡಗಳಿದ್ದು 15 ಜನ ಚುನಾಯಿತ ಸದಸ್ಯರಿರುತ್ತಾರೆ ಹಾಗೂ 3 ಜನ ನಾಮನಿರ್ದೇಶಿತ ಸದಸ್ಯರು ಇರುತ್ತಾರೆ.ಅಳ್ನಾವರದ ಒಟ್ಟು ವಿಸ್ತೀರ್ಣ 10.59 ಚದರ ಅಡಿ.ಅಳ್ನಾವರ ಪಟ್ಟಣವು ಧಾರವಾಡ ಹೆಡ್ ಕ್ವಾಟರ್ಸನಿಂದ 33 ಕಿ.ಮೀ ದೂರದಲ್ಲಿದೆ.ಅಳ್ನಾವರ ಪಟ್ಟಣದ ಒಟ್ಟು ಜನಸಂಖ್ಯೆ 2011 ರ ಜನಗಣತಿ ಪ್ರಕಾರ 17240 ಜನಸಂಖ್ಯೆ ಇರುತ್ತದೆ.
Town Panchayat Alnavar: The town panchayat Alnavar(TP) was constituted in 1973.The TP was constitued in 1973.The Alnavar TP has got 15 wardd and equal number of councillors and 3 numbers of nominee councillors.The population of the town as per 2011 census 17240.Alnavar is fast growing town in Dharwad district.Alnavar town is 33km away from district headqurters.
ಗಣಕೀಕರಣ: ಅಳ್ನಾವರ ಪಟ್ಟಣ ಪಂಚಾಯಿತಿಯಲ್ಲಿ 1980 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. ಅಳ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಗುರುತಿಸಿ,ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು,ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ.
Computerization: Birth & Death records are available online from the year 1990. Citizens can make use of this facility to register & obtain Birth & Death Certificates. The citizens can view the information related to Birth and Death online very soon. Properties within Alnavar Town Panchayath limits are identified & details have been collected & Computerization of records is under progress. Citizens can avail this facility to pay property tax shortly. ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ದಿನಾಂಕ : 15-09-2009 ರಂದು ಆನ್ ಲೈನ್ ಗೊಂಡಿದ್ದು, ವಾರದ 7 ದಿನಗಳು ಬೆಳಿಗ್ಗೆ ಗಂ. 8-00 ರಿಂದ ರಾತ್ರಿ ಗಂ. 8-00 ರ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 0836-2385918, ಅಧಿಕೃತ ಅಂತರ್ಜಾಲ : www.alnavartown.gov.in
ಕರ್ನಾಟಕ ನಾಗರೀಕ ಸೇವೆ ಖಾತರಿ ಅಧಿನಿಯಮ 2011: ಅಳ್ನಾವರ ಪಟ್ಟಣ ಪಂಚಾಯತದಲ್ಲಿ ಈ ಸೇವೆಯನ್ನು ದಿನಾಂಕ : 01-03-2012 ರಿಂದ ಪ್ರಾರಂಭಿಸಲಾಗಿದ್ದು ಕೆಲಸದ ದಿನಗಳಂದು ಸಾರ್ವಜನಿಕರು ನಿಗಧಿಪಡಿಸಿದ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಿ ಜನನ-ಮರಣ ಹಾಗೂ ಅಲಭ್ಯ ಪ್ರಮಾಣ ಪತ್ರ, ಆಸ್ತಿ ಉತಾರ, ಕಟ್ಟಡ ಪರವಾನಿಗೆ, ಹೊಸ ನಳದ ಜೋಡಣೆ, ಹೊಸ ಉದ್ಧಿಮೆ ಪರವಾಣಿಗೆ ಪತ್ರವನ್ನು ಅಳ್ನಾವರ ಪಟ್ಟಣ ಪಂಚಾಯತ ಕಾರ್ಯಾಲಯದ ಸಹಾಯವಾಣಿ ಕೇಂದ್ರದಲ್ಲಿ ಪಡೆಯಬಹುದಾಗಿದೆ. ದೂರವಾಣಿ: 0836-2385918. ಅಂತರ್ಜಾಲ : www.kgsc.kar.nic.in ವೆಬ್ ಸೈಟನಲ್ಲಿ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು. This Page is Maintained By Shri S R Hirehal (SDC). Last updated on 02-05-2012

